ಇಂಜಿನಿಯರಿಂಗ್ ಕಾಲೇಜು ಪ್ರವೇಶ
ಇಂಜಿನಿಯರಿಂಗ್ ಕಾಲೇಜು ಪ್ರವೇಶ 2004ನೆ ವರ್ಷದಲ್ಲಿ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಪಿ ಯು ಕಾಲೇಜನಲ್ಲಿ ಓದಿದ್ದ ನಾನು ಪರೀಕ್ಷೆಯಲ್ಲಿ ಶೇಕಡಾ 81% ಅಂಕ ಪಡೆದು ಪಾಸಾಗಿದ್ದೆ. ಸಿಇಟಿ ಪರೀಕ್ಷೆಯಲ್ಲಿ 7007 ರ‍್ಯಾಂಕ್ ಪಡೆದಿದ್ದೆ. ಡಾಕ್ಟರ್ ಓದುವ ಅವಕಾಶದಿಂದ ವಂಚಿತನಾಗಿ ಉಳಿದ ವೃತ್ತಿಪರ ಕೋರ್ಸಗಳಾದ ಬಿಎಸ್ಸಿ ಅಗ್ರಿ, ವೆಟರ್ನರಿ ಪ್ರವೇಶಕ್ಕೆ ಪ್ರಯತ್ನ ಮಾಡಿ ವಿಫಲನಾಗಿ ಇಂಜಿನಿಯರಿಂಗ್ ಸೇರುವುದು ಅನಿವಾರ್ಯವಾಗಿತ್ತು. ಇನ್ನು ಇಂಜಿನಿಯರಿಂಗ್ ಕಾಲೇಜುಗಳ ಸಿಇಟಿ ಕೌನ್ಸೆಲಿಂಗ್ ಪ್ರಾರಂಭವಾಗಿರಲಿಲ್ಲ ಯಾವ ಇಂಜಿನಿಯರಿಂಗ್ ಕಾಲೇಜು ಸೇರುವುದು ಎಂದು ಗೊಂದಲದಲ್ಲಿದ್ದೆ. ಕೆಲ ನನ್ನ ಸ್ನೇಹಿತರ ಸ್ಥಿತಿವಂತ ಪೋಷಕರು ಮ್ಯಾನೇಜ್ಮೆಂಟ್ ಕೋಟಾದಡಿ ಬೆಂಗಳೂರಿನ ಒಳ್ಳೆಯ ಇಂಜಿನಿಯರಿಂಗ್ ಕಾಲೇಜನಲ್ಲಿ ಪ್ರವೇಶ ಪಡೆದಿದ್ದರು. ನಾನು ಸಹ ನನ್ನ ತಂದೆಯ ಬಳಿ ಮ್ಯಾನೇಜ್ಮೆಂಟ್ ಕೋಟಾದಡಿ ಪ್ರಯತ್ನ ಮಾಡಿದರೆ ನನಗೂ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜನಲ್ಲಿ ಪ್ರವೇಶ ಸಿಗುತ್ತೆ ಅಂತ ಹಠ ಮಾಡಿದ್ದೆ. ಮಾಧ್ಯಮ ವರ್ಗದ ಕುಟುಂಬವಾದರೂ ತಂದೆ ತಾಯಿ ಇಬ್ಬರು ನೌಕರಿದಾರರೇ ಆದರೂ ಮನೆಯಲ್ಲಿ ಸ್ವಲ್ಪ ಹಣಕಾಸಿನ ತೊಂದರೆ ಇದ್ದ ಕಾರಣ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜನಲ್ಲಿ ಮ್ಯಾನೇಜ್ಮೆಂಟ್ ಕೋಟಾದಡಿ ಪ್ರವೇಶ ಪಡೆಯುವದು ವಿಫಲವಾಯಿತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಚಳ್ಳಕೆರೆಯಿಂದ ಬೆಂಗಳೂರು ಬಸ್ಸು ...