Posts

ಇಂಜಿನಿಯರಿಂಗ್ ಮೂರನೇ ಸೆಮಿಸ್ಟರ್

ಇಂಜಿನಿಯರಿಂಗ್ ಮೂರನೇ ಸೆಮಿಸ್ಟರ್ ಬಿಡಿಟಿ ಇಂಜಿನಿಯರಿಂಗ್ ನ ಮೂರನೇ ಸೆಮಿಸ್ಟರ್ ಪ್ರಾರಂಭದಲ್ಲಿ ನಮ್ಮ ಮನೆಯಲ್ಲಿ ಸ್ವಲ್ಪ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದ್ದರು ಮತ್ತು ನಾನು ಕ್ಲಾಸ್ ಪ್ರತಿನಿಧಿಯಾಗಿದ್ದರಿಂದ ಕಾಲೇಜನಲ್ಲಿ ಬಹಳಷ್ಟು ಸ್ನೇಹಿತರ ಸಂಪರ್ಕದಿಂದ ಹೊಸ ಮೊಬೈಲ್ ಬೇಕಾಗಿ ಮನೆಯಲ್ಲಿ ಕೇಳಿದ್ದೆ, ಕಂಪ್ಯೂಟರ್ ಸೈನ್ಸ್ ವಿಭಾಗವಾದರಿಂದ ಹೊಸ ಕಂಪ್ಯೂಟರ್ ನ ಅವಶ್ಯಕತೆಯಿತ್ತು ಮತ್ತು ಒಳ್ಳೆಯ ರೂಮ್ ನ ಹುಡುಕಾಟದಲ್ಲಿದ್ದೆ.  ಈ ಬಾರಿ ರೂಮ್ ಎಂ ಸಿ ಸಿ ಬ್ಲಾಕನಿಂದ ಆಂಜನೇಯ ಬಡಾವಣೆಯ ಹರ್ಷ ಬಿಲ್ಡಿಂಗ್ ಗೆ ಸ್ಥಳಾಂತರವಾಯಿತು. ಎಲೆಕ್ಟ್ರಾನಿಕ್ಸ್ ನಲ್ಲಿ ಓದುತಿದ್ದ ನನ್ನ ಹಳೆಯ ರೂಮ್ ಮೇಟ್ ಹೊಸದುರ್ಗದ ಕಂಚಿಪುರದವನ ಜೊತೆ ಎಲೆಕ್ಟ್ರಿಕ್ ನಲ್ಲಿ ಓದುತಿದ್ದ ಸೀನಿಯರ್ ಹೊಸದುರ್ಗದ ಹೊನ್ನೇನಹಳ್ಳಿನವರು ಸೇರಿ ರೂಮ್ ಮಾಡಿದೆವು. ಹೊಸದಾಗಿ ತೆಗೆದುಕೊಂಡಿದ್ದ ಕಂಪ್ಯೂಟರ್ ವಿದ್ಯಾಭ್ಯಾಸಕ್ಕಿಂತ ಚಲನಚಿತ್ರ ಹಾಡು ಕೇಳಲು, ಫಿಲ್ಮ್ ನೋಡಲು ಉಪಯೋಗವಾಗತ್ತಿತ್ತು. ಹೊಸ ಮೊಬೈಲ್ ನಂಬರ್ ಬಹಳಷ್ಟು ಸ್ನೇಹಿತರಿಗೆ ಶೇರ್ ಆಗಿತ್ತು. ಸ್ನೇಹಿತರಿಗೆ ಫಾರ್ವರ್ಡ್ ಮೆಸೇಜ್ ಕಳಿಸುವುದು ಮತ್ತು ಅವರು ಕಳಿಸಿದ ಮೆಸೇಜ್ ಪುಸ್ತಕಕ್ಕೆ ಬರೆಯುವುದು ಮಾಮೂಲಿಯಾಗಿತ್ತು. ಈಗಿನಂತೆ ಕಾಲ್ ಮತ್ತು ಮೆಸೇಜ್ ದರಗಳು ಕಮ್ಮಿಯಿರಲಿಲ್ಲ ಆದರಿಂದ ಮೊಬೈಲ್ ತುರ್ತು ಸಂದರ್ಭಕ್ಕೆ ಮಾತ್ರ ಉಪಯೋಗಿಸುತ್ತಿದ್ದೆನು.  ಎಬಿವಿಪಿ ಸಂಪರ್ಕವಿದ್ದರಿಂದ ದಾವಣಗೆರೆಯಲ್ಲಿದ್ದ...

ಇಂಜಿನಿಯರಿಂಗ್ ಮೊದಲ ವರ್ಷ

 ಇಂಜಿನಿಯರಿಂಗ್ ಮೊದಲ ವರ್ಷ  ದಾವಣಗೆರೆಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜನಲ್ಲಿ ಪ್ರವೇಶ ಪಡೆದವನು, ಒಂದು ವಾರದ ನಂತರ ಚಳ್ಳಕೆರೆಯಿಂದ ದಾವಣಗೆರೆಗೆ ಬಂದವನೆ, ಆಂಜನೇಯ ಬಡಾವಣೆಯಲ್ಲಿದ್ದ ಸಂಭಂದಿಕರ ಮನೆಯಲ್ಲಿ ಆಶ್ರಯ ಪಡೆದೆನು. ಮನೆಯಿಂದ ಕಾಲೇಜು ಎರಡು ಕಿಲೋಮೀಟರಿತ್ತು. ಮೊದಲ ವರ್ಷ ಮೊದಲ ಸೆಮಿಸ್ಟರ್ ಕೆಮಿಸ್ಟ್ರಿ ವಿಭಾಗವದರಿಂದ ಇಂಜಿನಿಯರಿಂಗ್ ಪ್ರಾರಂಭದ ಮೊದಲ ತರಗತಿ ಕೆಮಿಸ್ಟ್ರಿಯಾಗಿತ್ತು. ನೆನಪು ಇರುವಂತೆ ಪ್ರೊಫೆಸರ್ ದುರ್ಗಪ್ಪ ಮೊದಲ ತರಗತಿ ತಗೆದುಕೊಂಡಿದ್ದರು. ಹೆಸರಾಂತ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಅದರಿಂದ ತರಗತಿಯಲ್ಲಿ ಪ್ರತಿಭಾವಂತ ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚಿದ್ದರೂ. 64 ವಿದ್ಯಾರ್ಥಿಗಳಲ್ಲಿ ಇಬ್ಬರೋ ಮೂವರಲ್ಲಿ ಮಾತ್ರ ಸ್ಕೂಟರ್ ಯಿತ್ತು ಉಳಿದವರು ಮನೆಗಳಿಂದ, ಹಾಸ್ಟೆಲ್ ಗಳಿಂದ ನೆಡದುಕೊಂಡು ಅಥವಾ ಸೈಕಲ್ ನಲ್ಲಿ ಬರುತ್ತಿದ್ದರು.  ನಾನು ಕಾಲೇಜುಗೆ ಬೆಳಗ್ಗೆ 8 ಗಂಟೆಗೆ ಮನೆಯಿಂದ ಎರಡು ಕಿಲೋಮೀಟರ್ ನೆಡೆದು ಬರುತ್ತಿದ್ದನು, 10 ರಿಂದ 10:15 ವರೆಗೆ ತಿಂಡಿಗೆ ವಿರಾಮವಿರುತ್ತಿತ್ತು, ತದನಂತರ 12:15 ರಿಂದ 2 ಗಂಟೆವರಿಗೆ ಊಟಕ್ಕೆ ವಿರಾಮವಿರುತ್ತಿತ್ತು, ಮತ್ತೆ 2 ಗಂಟೆಯಿಂದ 5 ರವರಿಗೆ ಕಾಲೇಜುವಿರುತ್ತಿತ್ತು.  ಒಂದು ತಿಂಗಳ ಮುಗಿದ ನಂತರ ಮೊದಲ ಅಸೆಸ್ಮೆಂಟ್ ಪರೀಕ್ಷೆವಿತ್ತು. ಮನೆಯಲ್ಲೆಯಿದ್ದರಿಂದ ಓದುವುದು ಬಿಟ್ಟು ಬೇರೆ ಕೆಲಸವಿರಲಿಲ್ಲ. ಬಹುತೇಕ ಎಲ್ಲಾ ವಿಷಯದಲ್ಲಿ 25ಕ್ಕೆ 25 ...

ಇಂಜಿನಿಯರಿಂಗ್ ಕಾಲೇಜು ಪ್ರವೇಶ

ಇಂಜಿನಿಯರಿಂಗ್ ಕಾಲೇಜು ಪ್ರವೇಶ 2004ನೆ ವರ್ಷದಲ್ಲಿ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಪಿ ಯು ಕಾಲೇಜನಲ್ಲಿ ಓದಿದ್ದ ನಾನು ಪರೀಕ್ಷೆಯಲ್ಲಿ ಶೇಕಡಾ 81% ಅಂಕ ಪಡೆದು ಪಾಸಾಗಿದ್ದೆ. ಸಿಇಟಿ ಪರೀಕ್ಷೆಯಲ್ಲಿ 7007  ರ‍್ಯಾಂಕ್ ಪಡೆದಿದ್ದೆ. ಡಾಕ್ಟರ್ ಓದುವ ಅವಕಾಶದಿಂದ ವಂಚಿತನಾಗಿ ಉಳಿದ ವೃತ್ತಿಪರ ಕೋರ್ಸಗಳಾದ ಬಿಎಸ್ಸಿ ಅಗ್ರಿ, ವೆಟರ್ನರಿ ಪ್ರವೇಶಕ್ಕೆ ಪ್ರಯತ್ನ ಮಾಡಿ ವಿಫಲನಾಗಿ ಇಂಜಿನಿಯರಿಂಗ್ ಸೇರುವುದು ಅನಿವಾರ್ಯವಾಗಿತ್ತು.  ಇನ್ನು ಇಂಜಿನಿಯರಿಂಗ್ ಕಾಲೇಜುಗಳ ಸಿಇಟಿ ಕೌನ್ಸೆಲಿಂಗ್  ಪ್ರಾರಂಭವಾಗಿರಲಿಲ್ಲ ಯಾವ ಇಂಜಿನಿಯರಿಂಗ್ ಕಾಲೇಜು ಸೇರುವುದು ಎಂದು ಗೊಂದಲದಲ್ಲಿದ್ದೆ. ಕೆಲ ನನ್ನ ಸ್ನೇಹಿತರ ಸ್ಥಿತಿವಂತ ಪೋಷಕರು ಮ್ಯಾನೇಜ್ಮೆಂಟ್ ಕೋಟಾದಡಿ ಬೆಂಗಳೂರಿನ ಒಳ್ಳೆಯ ಇಂಜಿನಿಯರಿಂಗ್ ಕಾಲೇಜನಲ್ಲಿ  ಪ್ರವೇಶ ಪಡೆದಿದ್ದರು. ನಾನು ಸಹ ನನ್ನ ತಂದೆಯ ಬಳಿ ಮ್ಯಾನೇಜ್ಮೆಂಟ್ ಕೋಟಾದಡಿ ಪ್ರಯತ್ನ ಮಾಡಿದರೆ ನನಗೂ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜನಲ್ಲಿ ಪ್ರವೇಶ ಸಿಗುತ್ತೆ ಅಂತ ಹಠ ಮಾಡಿದ್ದೆ. ಮಾಧ್ಯಮ ವರ್ಗದ ಕುಟುಂಬವಾದರೂ ತಂದೆ ತಾಯಿ ಇಬ್ಬರು ನೌಕರಿದಾರರೇ ಆದರೂ ಮನೆಯಲ್ಲಿ ಸ್ವಲ್ಪ ಹಣಕಾಸಿನ ತೊಂದರೆ ಇದ್ದ ಕಾರಣ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜನಲ್ಲಿ ಮ್ಯಾನೇಜ್ಮೆಂಟ್ ಕೋಟಾದಡಿ ಪ್ರವೇಶ ಪಡೆಯುವದು ವಿಫಲವಾಯಿತು.  ಆದರೂ ಛಲ ಬಿಡದ ತ್ರಿವಿಕ್ರಮನಂತೆ ಚಳ್ಳಕೆರೆಯಿಂದ ಬೆಂಗಳೂರು ಬಸ್ಸು ...