ಇಂಜಿನಿಯರಿಂಗ್ ಮೊದಲ ವರ್ಷ
ಇಂಜಿನಿಯರಿಂಗ್ ಮೊದಲ ವರ್ಷ
ದಾವಣಗೆರೆಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜನಲ್ಲಿ ಪ್ರವೇಶ ಪಡೆದವನು, ಒಂದು ವಾರದ ನಂತರ ಚಳ್ಳಕೆರೆಯಿಂದ ದಾವಣಗೆರೆಗೆ ಬಂದವನೆ, ಆಂಜನೇಯ ಬಡಾವಣೆಯಲ್ಲಿದ್ದ ಸಂಭಂದಿಕರ ಮನೆಯಲ್ಲಿ ಆಶ್ರಯ ಪಡೆದೆನು. ಮನೆಯಿಂದ ಕಾಲೇಜು ಎರಡು ಕಿಲೋಮೀಟರಿತ್ತು. ಮೊದಲ ವರ್ಷ ಮೊದಲ ಸೆಮಿಸ್ಟರ್ ಕೆಮಿಸ್ಟ್ರಿ ವಿಭಾಗವದರಿಂದ ಇಂಜಿನಿಯರಿಂಗ್ ಪ್ರಾರಂಭದ ಮೊದಲ ತರಗತಿ ಕೆಮಿಸ್ಟ್ರಿಯಾಗಿತ್ತು. ನೆನಪು ಇರುವಂತೆ ಪ್ರೊಫೆಸರ್ ದುರ್ಗಪ್ಪ ಮೊದಲ ತರಗತಿ ತಗೆದುಕೊಂಡಿದ್ದರು.
ಹೆಸರಾಂತ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಅದರಿಂದ ತರಗತಿಯಲ್ಲಿ ಪ್ರತಿಭಾವಂತ ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚಿದ್ದರೂ. 64 ವಿದ್ಯಾರ್ಥಿಗಳಲ್ಲಿ ಇಬ್ಬರೋ ಮೂವರಲ್ಲಿ ಮಾತ್ರ ಸ್ಕೂಟರ್ ಯಿತ್ತು ಉಳಿದವರು ಮನೆಗಳಿಂದ, ಹಾಸ್ಟೆಲ್ ಗಳಿಂದ ನೆಡದುಕೊಂಡು ಅಥವಾ ಸೈಕಲ್ ನಲ್ಲಿ ಬರುತ್ತಿದ್ದರು.
ನಾನು ಕಾಲೇಜುಗೆ ಬೆಳಗ್ಗೆ 8 ಗಂಟೆಗೆ ಮನೆಯಿಂದ ಎರಡು ಕಿಲೋಮೀಟರ್ ನೆಡೆದು ಬರುತ್ತಿದ್ದನು, 10 ರಿಂದ 10:15 ವರೆಗೆ ತಿಂಡಿಗೆ ವಿರಾಮವಿರುತ್ತಿತ್ತು, ತದನಂತರ 12:15 ರಿಂದ 2 ಗಂಟೆವರಿಗೆ ಊಟಕ್ಕೆ ವಿರಾಮವಿರುತ್ತಿತ್ತು, ಮತ್ತೆ 2 ಗಂಟೆಯಿಂದ 5 ರವರಿಗೆ ಕಾಲೇಜುವಿರುತ್ತಿತ್ತು.
ಒಂದು ತಿಂಗಳ ಮುಗಿದ ನಂತರ ಮೊದಲ ಅಸೆಸ್ಮೆಂಟ್ ಪರೀಕ್ಷೆವಿತ್ತು. ಮನೆಯಲ್ಲೆಯಿದ್ದರಿಂದ ಓದುವುದು ಬಿಟ್ಟು ಬೇರೆ ಕೆಲಸವಿರಲಿಲ್ಲ. ಬಹುತೇಕ ಎಲ್ಲಾ ವಿಷಯದಲ್ಲಿ 25ಕ್ಕೆ 25 ಅಂಕ ಬಂದಿದ್ದವು. ಬೇರೆಯವರಿಗೆ ಎಷ್ಟು ಅಂಕ ಬಂದಿವಿ ಎಂದು ತಿಳಿದು ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಿತ್ತು. ಓದಿನಲ್ಲಿ ಮುಂದೆಯಿದ್ದರಿಂದ ಬೇರೆಯವರು ನಮನ್ನು ಮಾತನಾಡಿಸಲು ಪ್ರಾರಂಭಿಸದರು. ಮೊದಲ ಅಸೆಸ್ಮೆಂಟ್ ಅಂಕಗಳು ಒಂದೆ ತಿಂಗಳನಲ್ಲಿ ಕೆಲವರನ್ನು ಟಾಪ್ಪರ್ ವಿಧ್ಯಾರ್ಥಿಗಳಾಗಿ ಮಾಡಿತ್ತು.
ಹೆಸರುಗಳ ಪ್ರಕಾರ ಪ್ರಾಯೋಗಿಕ ಲ್ಯಾಬ್ಗಳಿಗೆ ನಾಲ್ಕು ಬ್ಯಾಚ್ ಗಳನ್ನೂ ಮಾಡಿದರು. ನನ್ನ ಹಿಂದಿನ ಹೆಸರಿನ ಹುಡುಗ ನನ್ನ ತರಗತಿಯ ಆತ್ಮೀಯ ಗೆಳೆಯನಾಗಿ ಪರಿಚಿತನಾದನು. ಅವನು ಸ್ಥಳೀಯವಾಗಿ ವಾಸವಿದ್ದು ಸೈಕಲ್ ಬಳಸುತ್ತಿದ್ದನು. ಕೆಲವೇ ವಾರಗಳಲ್ಲಿ ನಮ್ಮಿಬ್ಬರ ಜೊತೆ ಮತ್ತಿಬ್ಬರು ಸೇರಿ ನಮ್ಮದು ನಾಲ್ಕು ಜನರ ಆತ್ಮೀಯ ಬಳಗವಾಯಿತು.
ಕಾಲೇಜು ಮುಗಿದ ತಕ್ಷಣ ಬಿಡಿಟಿ ಹಾಸ್ಟೆಲ್ ಗೆ ಹೋಗುವುದು ಅಲ್ಲಿ ವಾಸವಿದ್ದ ವಿದ್ಯಾರ್ಥಿಗಳ ರೂಮ್ ಗೆ ಹೋಗಿ ಹರಟೆ ಹೊಡೆಯುವುದು ಹೀಗೆ ನಾನು ಮನೆ ವಾತಾವರಣದಿಂದ ಹೊರ ಪ್ರಪಂಚಕ್ಕೆ ಬೆರೆಯಿತ್ತು ಹೋದೆ. ಹಾಸ್ಟೆಲ್ ಬಳಿಯಿದ್ದ ನಾಗಣ್ಣನ ಅಶೋಕಣ್ಣನ ಕ್ಯಾಂಟೀನ್ ನಲ್ಲಿ ಟೀ ಕುಡಿಯುವುದು, ಮಂಡಕ್ಕಿ ಮೆಣಸಿನಕಾಯಿ ತಿನ್ನುವುದು ನಮ್ಮ ದೈನಿಂದಿನ ಕೆಲಸವಾಗುತ್ತಾ ಹೋಯಿತು. ನಮ್ಮ ಸೀನಿಯರ್ ಗಳು ಹೋಗಿ ಬರುವ ಜೂನಿಯರ್ ಹುಡುಗಿಯರನ್ನು ನೋಡುವುದು ಕಾಮೆಂಟ್ ಪಾಸ್ ಮಾಡುವುದು ಸಾಮಾನ್ಯವಾಗಿರುತಿತ್ತು.
ಮೂರೂ ತಿಂಗಳು ಮುಗಿಯುದರಲ್ಲಿ ಮೊದಲ ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ ಬಿಡುಗಡೆಯಾಯಿತು. ಯಾವುದೋ ಕೆಲಸಕ್ಕೆ ಅಡ್ಮಿಶನ್ ಬ್ಲಾಕ್ ಗೆ ಹೋಗಿದ್ದ ನನಗೆ ನನ್ನ ತರಗತಿಯ ಶಿವಮೊಗ್ಗ ಹುಡುಗಿ ಮಾತನಾಡಿಸುವ ನೆಪದಲ್ಲಿ ಪಿನ್ ಕೋಡ್ ಕೇಳಿದಾಗ, ಇನ್ನೂ ಕೆಲವು ಹುಡುಗಿಯರು ತರಗತಿ ವಿಷಯ ಕೇಳುತ್ತಿದ್ದಾಗ ನಮ್ಮ ಬಗ್ಗೆ ನಮಗೆ ಪುಕ್ಷಟ್ಟೆ ಬಿಲ್ಡ್ ಅಪ್ ಆಗುತ್ತಿತ್ತು.
ಮೊದಲ ಸೆಮಿಸ್ಟರ್ ಪರೀಕ್ಷೆ ಪ್ರಾರಂಭಗೊಂಡು ಪ್ರತಿ ಉತ್ತರ ಪತ್ರಿಕೆಯಲ್ಲಿ ಬರಿಯುತ್ತಿದ್ದ ರಿಜಿಸ್ಟರ್ ನಂಬರ್ BE040311 ಈಗಲೂ ನೆನಪಿದೆ.
ಪರೀಕ್ಷೆ ಮುಗಿದು ಚಳ್ಳಕೆರೆಗೆ ಬಂದು ಒಂದು ತಿಂಗಳು ರಜೆ ಮುಗಿದು ದಾವಣಗೆರೆಗೆ ಮತ್ತೆ ಎರಡನೇ ಸೆಮಿಸ್ಟರ್ಗೆ ವಾಪಸ್ಸು ಬಂದಾಗ ಅನಿವಾರ್ಯ ಕಾರಣಗಳಿಂದ ಸಂಭಂದಿಕರ ಮನೆ ತೊರೆದು ರೂಮ್ ಮಾಡುವು ಪರಿಸ್ಥಿತಿ ಬಂತು. ಶಿವಮೊಗ್ಗದಲ್ಲಿ ಪಿ ಯು ಕಾಲೇಜುನಲ್ಲಿ ಓದುತ್ತಿದ್ದ ಸ್ನೇಹಿತ ನಮ್ಮ ಕಾಲೇಜುನಲ್ಲೇ ಎಲೆಕ್ಟ್ರಾನಿಕ್ಸ್ ಪ್ರವೇಶ ಪಡೆದಿದ್ದ. ಇಬ್ಬರು ಸೇರಿ ತಿಂಗಳಿಗೆ ಬಾಡಿಗೆ 400 ರೂಗೆ ಎಂಸಿಸಿ ಬ್ಲಾಕ್ ನಲ್ಲಿ ರೂಮ್ ಮಾಡಿದೆವು. ಹತ್ತಿರದಲ್ಲೇ ಮಹಾಂತೇಶ್ ಮೆಸ್ಸ್ ಗೆ ತಿಂಗಳಿಗೆ 400 ರೂ ಕೊಟ್ಟು ಹೋಗುತಿದ್ದೇವು. ಮನೆಯಲ್ಲಿ ಸ್ವಲ್ಪ ಆರ್ಥಿಕವಾಗಿ ಸಮಸ್ಯವಾದ ಕಾರಣ ಅಮ್ಮ ಕೊಡುತಿದ್ದ ತಿಂಗಳಿಗೆ 800 ರೂ ಗಳಲ್ಲಿ ಮ್ಯಾನೇಜ್ ಮಾಡಬೇಕಿತ್ತು. ಅಪರೋಪಕ್ಕೊಮ್ಮೆ ದುರ್ಗಾ ಟಿಫನ್ ಸೆಂಟರ್ನಲ್ಲಿ ಅವಲಕ್ಕಿ ಬಜ್ಜಿ ತಿನ್ನುತ್ತಿದ್ದೆನು. ಗುಂಡುಕಲ್ಲಿನಂತೆಯಿದ್ದ ನಾನು ಒಂದೇ ತಿಂಗಳಿನಲ್ಲಿ ಕರಗಿ ಸ್ಲಿಮ್ ಯಾಗಿದ್ದೆ.
ಮೊದಲ ಸೆಮಿಸ್ಟರ್ ರಿಸಲ್ಟ್ ಬಂದು ಶೇಕಡಾ 80% ಅಂಕ ಪಡೆದು ಪಾಸಾಗಿದ್ದೆ. ಒಳ್ಳೆಯ ಅಂಕ ಬಂದು ನಮ್ಮ ರೆಪ್ಯೂಟೇಷನ್ ಮೇಲೆ ಹೋಗಿತ್ತು. ನನ್ನ ತರಗತಿಯಲ್ಲಿದ್ದ ಅಂಡಮಾನ್ ಹುಡುಗಿ ಪರಿಚಯವಾಗಿ ಕುತೂಹಲದಿಂದ ಒಮ್ಮೆ ರೂಮ್ ವರಿಗೆ ಹುಡುಕಿಕೊಂಡು ಬಂದು ನನ್ನ ರೂಮ್ ನೋಡಲು ಬಂದಳು. ನನಗೆ ಅಷ್ಟು ಉತ್ತಮವಾಗಿರದ ನನ್ನ ರೂಮ್ ತೋರಿಸಲು ಮುಜಗರವಾದರೂ ಏನು ಮಾಡದ ಪರಸ್ಥಿತಿ ಕೊನೆಗೂ ರೂಮ್ ನೋಡಿ ನನ್ನ ಪರಿಸ್ಥಿತಿ ಅರ್ಥಮಾಡಿಕೊಂಡು ಮತ್ತೆ ಯಾವತ್ತೂ ಬರಲಿಲ್ಲ.
ಕಾಲೇಜನ ಸಾಂಸ್ಕೃತಿಕ ಹಬ್ಬ "ಚೈತ್ರ" ಕಾರ್ಯಕ್ರಮ ನಡೆಸಲು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕಿತ್ತು. ನನ್ನ ತರಗತಿಯಲ್ಲಿ ವಿದ್ಯಾರ್ಥಿ ಪ್ರತಿನಿಧಿ ಆಯ್ಕೆ ಮಾಡಲು ಪ್ರೊಫೆಸರ್ ಬಂದಿದ್ದರು ನನ್ನ ತರಗತಿಯಿಲ್ಲಿದ್ದ ಕಾಲೇಜು ಪ್ರೊಫೆಸರ್ ಮಗಳಿಗೆ ಪ್ರತಿನಿದಿಯಾಗಲು ಒಪ್ಪಿಸಿದರು ಅವಳು ಒಪ್ಪಿ ನಿಂತಿಕೊಂಡಳು. ನಾನು ನನ್ನ ಪಕ್ಕಯಿದ್ದ ಆತ್ಮೀಯ ಗಳೆಯನಿಗೆ ನಾನು ನನ್ನ ಹೆಸರು ಹೇಳಲಾ ಅಂತ ಕೇಳಿದೆನು, ಅವನು ನಿನ್ನ ಹೆಸರು ಹೇಳಿದ್ರೆ ಎಲೆಕ್ಷನ್ ಆಗುತ್ತೆ ಅಂದನು, ನಾನು ಒಂದು ನಿಮಿಷ ಯೋಚನೆ ಮಾಡಿ ತುಂಬಾ ಧೈರ್ಯ ಮಾಡಿ ಸರ್ ನಾನು ಪ್ರತಿನಿಧಿ ಆಗ್ತೀನಿ ಅಂದಾಗ ಕ್ಷಣ ಮಾತ್ರದಲ್ಲಿ ನನ್ನ ಸ್ನೇಹಿತೆ ಪ್ರೊಫೆಸರ್ ಮಗಳು ವಾಪಸ್ಸು ಒಪ್ಪಿ ಕೂತಳು ನಾನು ಅವಿರೋಧ ಆಯ್ಕೆಯಾಗಿದ್ದೆ. ಆ ಒಂದು ನಿರ್ಧಾರ ನನ್ನ ಕಾಲೇಜು ದಿನಗಳ ಮರೆಯಲಾಗದ ನೆನಪುಗಳಿಗೆ ವೇದಿಕೆಯಾಯಿತು.
ಒಂದೇ ವಾರದಲ್ಲೇ ವಿದ್ಯಾರ್ಥಿ ಸಂಘದ ಅಧ್ಯಕ್ಷರನ್ನು ಆಯ್ಕೆಮಾಡಲು ಚುನಾವಣೆ ನಡೆಯಿತು. ಚುನಾವಣೆ ರಾಜಕೀಯ ತುಂಬಾ ಜೋರಿತ್ತು ಪ್ರತಿನಿದಿಗಳ ಹೈಜಾಕ್, ಆಮಿಷ, ಹೀಗೆ ಚುನಾವಣೆ ರಂಗೇರಿತು. ಚುನಾವಣಾ ದಿನ ಪ್ರೊಫೆಸರ್ ಗಳು ವಿದ್ಯಾರ್ಥಿ ಸಂಘ ಆಯ್ಕೆ ಮಾಡಿ ಈ ವರ್ಷದ ಸಾಂಸ್ಕೃತಿಕ ಹಬ್ಬ "ಚೈತ್ರ" ಕ್ಯಾನ್ಸಲ್ ಮಾಡಿ ಆ ಹಣವನ್ನು ಸುನಾಮಿ ಸಂತ್ರಸ್ತರಿಗೆ ನೀಡೋಣ ಅಂದಾಗ ನಮಗೆಲ್ಲ ಕಸಿವಿಸಿಯಾಗಿ ಅಲ್ಲೇ ಬೇಡ ಅಂತ ಸಣ್ಣದೊಂದು ಪ್ರತಿಭಟನೆ ಮಾಡಿದೆವು, ಕೊನೆಗೂ ವಿದ್ಯಾರ್ಥಿ ಪ್ರತಿನಿಧಿಗಳ ಮನವಿಗೆ ಸ್ಪಂದಿಸಿ ಸಾಂಸ್ಕೃತಿಕ ಹಬ್ಬ "ಚೈತ್ರ" ನೆಡೆಸಲು ತೀರ್ಮಾನಿಸದರು.
ನಾನು ವಿದ್ಯಾರ್ಥಿ ಪ್ರತಿನಿಧಿಯಾಗಿ ಇಂಗ್ಲಿಷ್ ಬಾರದೆ ಕನ್ನಡದಲ್ಲಿ ತರಗಿತಿಯಲ್ಲಿ ಮಾಹಿತಿ ನೀಡುವಾಗ ಅಂಡಮಾನ್ ವಿದ್ಯಾರ್ಥಿಗಳು "ಇಂಗ್ಲಿಷ್", "ಇಂಗ್ಲಿಷ್" ಅಂತ ರೇಗೆಸುತ್ತಿದ್ದರು. ಇಂಗ್ಲಿಷ್ಗೂ ನಮಗೂ ಈಗಲೂ ಆಗಬಾರಲ್ಲ ಅದು ಬೇರೆ ವಿಷಯ. ನನ್ನ ತರಗತಿಯಿಂದ ನಾಲ್ಕು ಜನ ಸೇರಿ ಬಾಯ್ಸ್ ಸಿನಿಮಾದ ಹಾಡಿಗೆ ಡಾನ್ಸ್ ಮಾಡೋಣ ಅಂತ ಮಾಡಿದೆವು. ನಾವು ಸ್ಕ್ರೀನಿಂಗ್ ಹೋದಾಗ ಎಲ್ಲರು ನನ್ನ ಡಾನ್ಸ್ ನೋಡಿ ಬಿದ್ದು ಬಿದ್ದು ನಕ್ಕಿದ್ದರು ಆದ್ರೂ ಜಡ್ಜ್ಸ್ ಸೆಲೆಕ್ಟ್ ಮಾಡಿದ್ರು ಅವತ್ತೇ ಕೊನೆ ಮೊತ್ತೆ ಡಾನ್ಸ್ ಮಾಡಲು ಧೈರ್ಯ ಮಾಡಲಿಲ್ಲ.
ನಾನು ವಿದ್ಯಾರ್ಥಿ ಪ್ರತಿನಿಧಿಯಾಗಿದ್ದಿರಿಂದ ಗೆಳೆಯ, ಗೆಳತಿಯರು ಆತ್ಮೀಯವಾಗಿ ತರಗತಿಗೆ ಕೇಕ್ ತಂದು ನನ್ನ ಹುಟ್ಟುಹಬ್ಬ ಆಚರಿಸಿದ್ದರು ಈ ಅವಕಾಶಗಳು ಮತ್ಯಾರಿಗೆ ದೊರಕಿತು.
ಪಠ್ಯತರ ಚಟುವಟಿಕೆಗಳು ತುಂಬಾ ಜಾಸ್ತಿಯಾದರಿಂದ ಎರಡನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶೇಕಡಾ 69% ಅಂಕ ಬಂದವು
ಮುಂದಿನ ಅನುಭವ ಮತ್ತೆ ಬರೆಯುವ.
Comments
Post a Comment