ಇಂಜಿನಿಯರಿಂಗ್ ಮೂರನೇ ಸೆಮಿಸ್ಟರ್

ಇಂಜಿನಿಯರಿಂಗ್ ಮೂರನೇ ಸೆಮಿಸ್ಟರ್


ಬಿಡಿಟಿ ಇಂಜಿನಿಯರಿಂಗ್ ನ ಮೂರನೇ ಸೆಮಿಸ್ಟರ್ ಪ್ರಾರಂಭದಲ್ಲಿ ನಮ್ಮ ಮನೆಯಲ್ಲಿ ಸ್ವಲ್ಪ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದ್ದರು ಮತ್ತು ನಾನು ಕ್ಲಾಸ್ ಪ್ರತಿನಿಧಿಯಾಗಿದ್ದರಿಂದ ಕಾಲೇಜನಲ್ಲಿ ಬಹಳಷ್ಟು ಸ್ನೇಹಿತರ ಸಂಪರ್ಕದಿಂದ ಹೊಸ ಮೊಬೈಲ್ ಬೇಕಾಗಿ ಮನೆಯಲ್ಲಿ ಕೇಳಿದ್ದೆ, ಕಂಪ್ಯೂಟರ್ ಸೈನ್ಸ್ ವಿಭಾಗವಾದರಿಂದ ಹೊಸ ಕಂಪ್ಯೂಟರ್ ನ ಅವಶ್ಯಕತೆಯಿತ್ತು ಮತ್ತು ಒಳ್ಳೆಯ ರೂಮ್ ನ ಹುಡುಕಾಟದಲ್ಲಿದ್ದೆ. 

ಈ ಬಾರಿ ರೂಮ್ ಎಂ ಸಿ ಸಿ ಬ್ಲಾಕನಿಂದ ಆಂಜನೇಯ ಬಡಾವಣೆಯ ಹರ್ಷ ಬಿಲ್ಡಿಂಗ್ ಗೆ ಸ್ಥಳಾಂತರವಾಯಿತು. ಎಲೆಕ್ಟ್ರಾನಿಕ್ಸ್ ನಲ್ಲಿ ಓದುತಿದ್ದ ನನ್ನ ಹಳೆಯ ರೂಮ್ ಮೇಟ್ ಹೊಸದುರ್ಗದ ಕಂಚಿಪುರದವನ ಜೊತೆ ಎಲೆಕ್ಟ್ರಿಕ್ ನಲ್ಲಿ ಓದುತಿದ್ದ ಸೀನಿಯರ್ ಹೊಸದುರ್ಗದ ಹೊನ್ನೇನಹಳ್ಳಿನವರು ಸೇರಿ ರೂಮ್ ಮಾಡಿದೆವು.

ಹೊಸದಾಗಿ ತೆಗೆದುಕೊಂಡಿದ್ದ ಕಂಪ್ಯೂಟರ್ ವಿದ್ಯಾಭ್ಯಾಸಕ್ಕಿಂತ ಚಲನಚಿತ್ರ ಹಾಡು ಕೇಳಲು, ಫಿಲ್ಮ್ ನೋಡಲು ಉಪಯೋಗವಾಗತ್ತಿತ್ತು. ಹೊಸ ಮೊಬೈಲ್ ನಂಬರ್ ಬಹಳಷ್ಟು ಸ್ನೇಹಿತರಿಗೆ ಶೇರ್ ಆಗಿತ್ತು. ಸ್ನೇಹಿತರಿಗೆ ಫಾರ್ವರ್ಡ್ ಮೆಸೇಜ್ ಕಳಿಸುವುದು ಮತ್ತು ಅವರು ಕಳಿಸಿದ ಮೆಸೇಜ್ ಪುಸ್ತಕಕ್ಕೆ ಬರೆಯುವುದು ಮಾಮೂಲಿಯಾಗಿತ್ತು. ಈಗಿನಂತೆ ಕಾಲ್ ಮತ್ತು ಮೆಸೇಜ್ ದರಗಳು ಕಮ್ಮಿಯಿರಲಿಲ್ಲ ಆದರಿಂದ ಮೊಬೈಲ್ ತುರ್ತು ಸಂದರ್ಭಕ್ಕೆ ಮಾತ್ರ ಉಪಯೋಗಿಸುತ್ತಿದ್ದೆನು. 

ಎಬಿವಿಪಿ ಸಂಪರ್ಕವಿದ್ದರಿಂದ ದಾವಣಗೆರೆಯಲ್ಲಿದ್ದ ತುಮಕೂರಿನ ಪೂರ್ಣಾವಧಿ ಕಾರ್ಯಕರ್ತರೊಬ್ಬರು ತೆರೀಕೆರೆಯಲ್ಲಿ ಆಯೋಜಿಸಲಾಗಿದ್ದ ಶಿಬಿರಕ್ಕೆ ಕರೆಯಲು ನಮ್ಮ ಕಾಲೇಜನ ಹರಪನಹಳ್ಳಿಯ ಹುಡುಗನ ಜೊತೆ ಬಂದಿದ್ದರು. 

ಸೆಮಿಸ್ಟರ್ ಪ್ರಾರಂಭವಾಗಿ ಒಂದು ತಿಂಗಳು ಕಳೆಯುವದರಲ್ಲಿ ಗಣೇಶನ ಹಬ್ಬ ಬಂದಿತ್ತು. ನಾನು ಮತ್ತು ನನ್ನ ರೂಮ್ ಮೇಟ್ ಹರ್ಷ ಬಿಲ್ಡಿಂಗ್ ರೂಮ್ ನಲ್ಲಿ ಒಂದು ಅಡಿ ಎತ್ತರದ ಗಣೇಶ ಮೂರ್ತಿ ತಂದು ಕುರಿಸಿದೆವು. ಇದನ್ನು ನೋಡಲು ಮೊದಲನೇ ದಿನ ಬಂದ ನನ್ನ ಕ್ಲಾಸ್ ನ ಆತ್ಮೀಯ ಗೆಳೆಯರ ಬಳಗ ಐದು ಅಡಿ ಎತ್ತರದ ಗಣೇಶ ಮೂರ್ತಿ ತಂದು ಅದನ್ನು ವಿಸರ್ಜಿಸೋಣ ಅಂತ ಮಾತಾಡಿದರು. ತಕ್ಷಣ ದಾವಣಗೆರೆಯ ಹಳೆಯ ಪೇಟೆಗೆ ಹೋಗಿ ಐದು ಅಡಿ ಮೂರ್ತಿ ತಂದಿದ್ದು ಆಯಿತು, ಮೂರನೇ ದಿನಕ್ಕೆ ಹರ್ಷ ಬಿಲ್ಡಿಂಗ್ ನಿಂದ ಆಟೋದಲ್ಲಿ ಹೋಗಿ ಗಣೇಶ ಮೂರ್ತಿ ವಿಸರ್ಜಿಸುವುದು ಎಂದು ತೀರ್ಮಾನಿಸಿದೆವು. ಎರಡನೇ ದಿನ ಐದು ಅಡಿ ಮೂರ್ತಿ ನೋಡಲು ಬಂದ ಹರಪನಹಳ್ಳಿ ಎಬಿವಿಪಿ ಗೆಳೆಯ ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್ ಮೆರವಣಿಗೆ ಮೂಲಕ ತಮಟೆಗಳೊಂದಿಗೆ ಎಲ್ಲಾ ಬಿಡಿಟಿ ವಿದ್ಯಾರ್ಥಿಗಳ ಜೊತೆ ಐದನೇ ದಿನ ವಿಸರ್ಜಿಸೋಣ ಎಂದೆನು. ದಿನದಿಂದ ದಿನಕ್ಕೆ ಗಣೇಶನಿಗೆ ಡಿಮ್ಯಾಂಡೋ ಡಿಮ್ಯಾಂಡೋ.

ಎಲ್ಲಾ ವಿದ್ಯಾರ್ಥಿಗಳ ಬಳಿ ಚಂದ ಎತ್ತಿ ಐದನೇ ದಿನ ಎಲ್ಲಾ ತಯಾರಿ ಮಾಡಿದೆವು. ಹರ್ಷ ಬಿಲ್ಡಿಂಗ್ ಗಣಪ ಬಿಡಿಟಿ ಗಣಪನಾಗಿದ್ದ. 200 ರಿಂದ 250 ಕ್ಕೂ ಹೆಚ್ಚು ಜನ ಸೇರಿದ್ದರು. ಮೆರವಣಿಗೆಯಲ್ಲಿ ಈಗಿನಂತೆ ಡಿಜೆ ಇರಲಿಲ್ಲ, ತಮಟೆ ಸಿಕ್ಕಿತ್ತು ಆದ್ರೆ ತಮಟೆ ಬಾರಿಸುವುರು ಸಿಗಲಿಲ್ಲ ಆದುದರಿಂದ ಸಿಕ್ಕ ಸಿಕ್ಕ ಹುಡುಗರು ತಮಟೆಯನ್ನು ಕರ್ಕಶವಾಗಿ ಬಾರಿಸುತ್ತಿದ್ದರು. ಬಣ್ಣಗಳೊಂದಿಗೆ ಗಣೇಶನ ಮೂರ್ತಿ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ಹರ್ಷ ಬಿಲ್ಡಿಂಗ್ ನಿಂದ ಪ್ರಾರಂಭವಾಗಿ ಮೆಡಿಕಲ್ ಹಾಸ್ಟೆಲ್ ಮೂಲಕ ಸಾಗಿ ಬಿಡಿಟಿ ಬಾಯ್ಸ್ ಹಾಸ್ಟೆಲ್ ಮೂಲಕ ಬಂದು ವಿದ್ಯಾನಗರದ ಚಾನೆಲ್ ನಲ್ಲಿ ಮುಕ್ತಾಯವಾಯಿತು.

ಅಲ್ಲೊಂದು ನನ್ನ ಕಾಲೇಜನ ದಾವಣಗೆರೆಯ ಸ್ಥಳೀಯ ಪೋಕರಿ ಹುಡುಗರ ಗುಂಪಿಗೆ ನಾನು ಚಳ್ಳಕೆರೆಯಿಂದ ಬಂದು ದಾವಣಗೆರೆಯಲ್ಲಿ ಯೆಶಸ್ವಿಯಾಗಿ ಗಣೇಶನ ಮೂರ್ತಿ ವಿಸರ್ಜನಾ ಮೆರವಣಿಗೆ ಆಯೋಜಿಸಿದ್ದು ಮತ್ತು ನಾನು ಬೆಳೆಯುತ್ತಿರುವ ರೀತಿ ಅವರ ಕಣ್ಣು ಕೆಂಪಾಗಿಸಿತ್ತು.

ಮೂರನೇ ಸೆಮಿಸ್ಟರ್ ಪ್ರಾರಂಭದಲ್ಲಿ ಮೊದಲ ವರ್ಷದ ಫಲಿತಾಂಶ ಬಂತು. ಕೆಲವು ವಿದ್ಯಾರ್ಥಿಗಳು ನಾಲ್ಕು ವಿಷಯಕ್ಕೂ ಹೆಚ್ಚು ವಿಷಯ ಫೇಲಾಗೆ ಮುಂದಿನ ವರ್ಷಕ್ಕೆ ಪ್ರವೇಶ ಪಡೆಯಲು ವಿಫಲರಾಗಿದ್ದರು. ಫೇಲಾದ ವಿದ್ಯಾರ್ಥಿಗಳೆಲ್ಲಾ ಸಂಘಟಿತರಾಗಿ ವಿಶೇಷ ಪರೀಕ್ಷೆ ನಡೆಸಿ ಉತ್ತೀರ್ಣರಾಗಲು ವಿಶ್ವವಿದ್ಯಾಲಯ ಮತ್ತೊಂದು ಅವಕಾಶ ನೀಡುವಂತೆ ಮನವಿ ಮಾಡಲು ಶಿವಮೊಗ್ಗದ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯಕ್ಕೆ ವ್ಯಾನ್ ಟ್ಯಾಕ್ಸಿ ಕಾರ್ ನಲ್ಲಿ ಗುಂಪಾಗಿ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಹೋಗಲು ನಿರ್ಧರಿಸಿದರು. ಕಾಂಗ್ರೆಸ್ ನೇತೃತ್ವದ ಸಮಿಶ್ರ ಸರ್ಕಾರವಿದ್ದರಿಂದ ಎನ್ಎಸ್ ಯುಐ ಸಂಘಟನೆಯ ಸಹಾಯ ಪಡೆಯಲಾಯಿತು. ಪೊಕರಿ ತಂಡವು ವಿಶೇಷ ಪರೀಕ್ಷೆಯ ಉಪಯೋಗ ಪಡೆದು ಎರಡನೇ ವರ್ಷಕ್ಕೆ ಅನುಮತಿ ಪಡೆದರು.

ನಾನು ನಿಧಾನವಾಗಿ ಕ್ಲಾಸ್ ಗೆ ಹೋಗುವುದು ಕಡಿಮೆ ಮಾಡಿ ವಿದ್ಯಾರ್ಥಿ ಹೋರಾಟ, ಕಾರ್ಯಕ್ರಮ, ಸಂಘಟನೆ ಅಂತಾ ಎಬಿವಿಪಿ ಸಂಪರ್ಕಕ್ಕೆ ಬಂದಿದ್ದೆ. ಈ ಸಂದರ್ಭದಲ್ಲಿ ಆತ್ಮೀಯರಾದವರು ದಾವಣಗೆರೆಯಲ್ಲಿದ್ದ ತುಮಕೂರಿನ ಪೂರ್ಣಾವಧಿ ಕಾರ್ಯಕರ್ತರು ಹಾಗೂ ಹರಪನಹಳ್ಳಿಯ ಗೆಳೆಯ. ಬಿಡಿಟಿ ಕಾಲೇಜನಲ್ಲಿ ಎಬಿವಿಪಿ ಘಟಕ ಮಾಡಲು ಹೊರಟಾಗ ನಮ್ಮ ಜೊತೆ ಬಂದಿದ್ದು ಸ್ಥಳೀಯ ಪೊಕರಿ ತಂಡ. ನಾನು ಪೊಕರಿ ತಂಡದ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸಿದರೂ ನಾನು ಚಳ್ಳಕೆರೆಯವನು ಸ್ಥಳಿಯನಲ್ಲ ಎಂಬಾ ಮನಸ್ಥಿತಿಯವರಾಗಿದ್ದರು.

ಒಮ್ಮೆ ಕೆ ಬಿ ಬಡಾವಣೆಯಲ್ಲಿದ್ದ ಎಬಿವಿಪಿ ಕಛೇರಿ ಜಯನಿವಾಸದಲ್ಲಿ ನಗರ ಅಭ್ಯಾಸವರ್ಗ ಆಯೋಜಿಸಲಾಗಿತ್ತು. ಅಂದು ನಗರ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಕಾರ್ಯಕ್ರಮವಿತ್ತು, ಯಾವದೇ ಪದವಿ ಅಪೇಕ್ಷವಿಲ್ಲದ ನನ್ನನ್ನು ತಾಂತ್ರಿಕ ವಿದ್ಯಾರ್ಥಿ ಪರಿಷತ್ ನ ನಗರ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದರು. 

ಇದನ್ನು ಜೀರ್ಣಿಸಕೊಳ್ಳಲಾಗದ ಪೊಕರಿ ತಂಡವು ಕ್ಷುಲ್ಲಕ ಕಾರಣಕ್ಕೆ ಜಗಳವಾಡಲು ಪ್ರಾರಂಭಿಸಿದರು. ಇದರ ಮುನ್ಸೂಚನೆ ಅರಿತ ನಾನು ವಾಗ್ವಾದ ಮಾಡಿ ನೇರವಾಗಿ ಕಾಲೇಜನ ಆಟದ ಮೈದಾನಕ್ಕೆ ಬಂದು ನನ್ನ ಕ್ಲಾಸ್ ಹುಡಗರ ಜೊತೆ ಕ್ರಿಕೆಟ್ ಆಡುತ್ತಿದ್ದೆನು. ಅಲ್ಲಿಗೂ ಬಂದ ಪೊಕರಿ ತಂಡ ಕಾಲು ಕೆರೆದು ಕಿರಿಕ್ ಮಾಡಿತು, ನಾನು ತಾಳ್ಮೆಯಿಂದ ಮಾತಾಡದೆ ಕ್ರಿಕೆಟ್ ಆಟ ಮುಗಿಸಿ ಬಿಡಿಟಿ ಬಾಯ್ಸ್ ಹಾಸ್ಟೆಲ್ ನ ನನ್ನ ಸ್ನೇಹಿತನ ರೂಮ್ ಗೆ ಬಂದೆನು. ಅಲ್ಲಿಗೂ ಬಂದವರೇ ಗಲಾಟೆ ಮಾಡಿದರು. ಅವರು ಐದು ಜನರ ತಂಡ ನಾನು ಏಕಾಂಗಿ ಹೊಡೆದಾಟ ಅನಿವಾರ್ಯವಾಯಿತು. ನಾಲ್ಕು ಏಟು ಹೊಡೆದರು (ಒಂದು ವರ್ಷದ ನಂತರ ನಾನು ಹೊಡೆದಿದ್ದು ಮುಂದೆ ಬರೆಯುವೆ). 

ಬಿಡಿಟಿ ಬಾಯ್ಸ್ ಹಾಸ್ಟೆಲ್ ನಿಂದ ಹರ್ಷ ಬಿಲ್ಡಿಂಗ್ ಗೆ ನನ್ನ ಆತ್ಮೀಯ ಗೆಳೆಯನ ಜೊತೆ ಬಂದೆನು. ಆದರೂ ಇನ್ನೂ ಸುಮ್ಮನಾಗದ ಪೊಕರಿ ತಂಡ ಕೆಲವು ಸ್ಥಳೀಯ ರೌಡಿಗಳೊಂದಿಗೆ ನನ್ನ ರೂಮ್ ಗೆ ಬಂದು ಹೊಡೆದು ರಾಬರಿ ಮಾಡಲು ಬರುತ್ತಿದ್ದರು ಎಂಬ ವಿಷಯ ಸ್ನೇಹಿತರಿಂದ ತಿಳಿದು ರೂಮ್ ಗೆ ಬೀಗ ಹಾಕಿ, ಖಾಲಿ ಮಾಡಿ ಆಟೋ ಹತ್ತಿ ಬಸ್ ಸ್ಟಾಂಡ್ ಗೆ ಬಂದು, ದಾವಣಗೆರೆಯಿಂದ ಚಳ್ಳಕೆರೆಗೆ ಬಸ್ ಹತ್ತಿದ್ದೆ. 

ಮನೆಗೆ ತಲುಪಿ ನಡೆದ ವಿಷಯ ನನ್ನ ಅಣ್ಣನಿಗೆ ತಿಳಸಿ ಪೊಲೀಸ್ ಕಂಪ್ಲೇಂಟ್ ಕೊಡಬೇಕೆಂದನು. ನನ್ನ ಅಣ್ಣ ತಕ್ಷಣ ದಾವಣಗೆರೆಯಲ್ಲಿದ್ದ ಸ್ನೇಹಿತನಾಗಿ ವಿಷಯ ತಿಳಸಿ ಫೊಕಾರಿ ತಂಡದವರ ಮಾಹಿತಿ ನೀಡಿದಾಗ ದುರ್ಗಮ್ಮ ಗುಡಿ ಬಳಿ ನನ್ನ ಅಣ್ಣನ ಸ್ನೇಹಿತನ ಪರಿಚಯಯಿದ್ದ ಬಲಾಢ್ಯರು ಕಾಲೇಜಗೆ ಹೋಗಿ ಪೊಕರಿ ತಂಡದವರನ್ನು ಹುಡುಕಿದರು. ವಿಷಯ ತಿಳಿದು ಪೊಕರಿ ತಂಡ ಎರಡು ದಿನ ಯಾರಿಗೂ ಸಿಕ್ಕಿರಲಿಲ್ಲ. ಕೊನೆಗೆ ಪೊಕರಿ ತಂಡದ ನಿಟ್ಟವಳ್ಳಿ ಬಲಾಢ್ಯರು ಮದ್ಯ ಪ್ರವೇಶಿಸಿ ನನಗೂ ಮತ್ತು ಪೋಕರಿ ತಂಡದವರನ್ನು ರಾಜಿ ಮಾಡಿಸಿದರು. ದಾವಣಗೆರೆಯ ರೌಡಿಸಿಂ ಸಣ್ಣದಾಗಿ ಪರಿಚಯವಾಗಿತ್ತು.

ನಾನು ಮತ್ತೆ ಯಾವತ್ತೂ ಕಾಲೇಜುನಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಬಾರದು, ಚುನಾವಣೆಯಲ್ಲಿ ನಿಲ್ಲಬಾರದು ಎಂದು ಷರತ್ತು ವಿಧಿಸಿತು. ಭವಿಷ್ಯ ಗೊತ್ತಿಲ್ಲದ್ದಿದರು ನಾನು ಮೂರನೇ ಸೆಮಿಸ್ಟರ್ ನಲ್ಲಿ ಆ ಷರತ್ತಿಗೆ ಬಲಾಢ್ಯರು ನಡುವೆಯ ವಿರೋದಿಸಿದ್ದೇ. ಬಿಡಿಟಿ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ, ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿದ್ದ ಸ್ಥಳೀಯ ಪೊಕರಿ ತಂಡಕ್ಕೆ ನಾನು ಚಳ್ಳಕೆರೆಯಿಂದ ಬಂದ ವಲಸಿಗನಾದರೂ ಸಂಕೇತಕವಾಗಿ ಷೆಡ್ಡು ಹೊಡೆದಿದ್ದೆ. ಆ ನಂತರ ನಮ್ಮ ನಡುವೆ ಹೊಡೆದಾಟ ಹೋಗಿ ಶೀತಲ ಸಮರ ಪ್ರಾರಂಭವಾಯಿತು. 

ಪಠ್ಯತರ ಚಟುವಟಕೆಗಳು ಹಾಗೂ ತರಗತಿ ಗೈರು ಹಾಜರಾತಿಗಳು ನಡುವೆ ಮೂರನೇ ಸೆಮಿಸ್ಟರ್ ನಲ್ಲಿ ಶೇಕಡಾ 69% ಅಂಕ ಬಂದವು


ಮುಂದಿನ ಅನುಭವ ಮತ್ತೆ ಬರೆಯುವ

Comments

Popular posts from this blog

ಇಂಜಿನಿಯರಿಂಗ್ ಕಾಲೇಜು ಪ್ರವೇಶ

ಇಂಜಿನಿಯರಿಂಗ್ ಮೊದಲ ವರ್ಷ